ನಾಳೆ SSLC ಫಲಿತಾಂಶ ಪ್ರಕಟವಾಗಲ್ಲ: ಸುರೇಶ್​ ಕುಮಾರ್​ ಸ್ಪಷ್ಟನೆ


ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟ ಮಾಡಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್​ ಕುಮಾರ್​ ನ್ಯೂಸ್‌ಫಸ್ಟ್‌‌ಗೆ ಸ್ಪಷ್ಟಪಡಿಸಿದ್ದಾರೆ.

ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವುದು ಕಷ್ಟ. ಸೋಮವಾರ ಅಥವಾ ಮಂಗಳವಾರ ಪ್ರಕಟಣೆಯಾಗುವ ಸಾಧ್ಯತೆಯಿದೆ ಅಂತ ಅವರು ಹೇಳಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ಸುದ್ದಿ ಸುಖಾಸುಮ್ಮನೆ ಬಿತ್ತರವಾಗುತ್ತಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೂ ವಿದ್ಯಾರ್ಥಿಗಳಿಗೆ ಭಯಪಡಿಸಿದ್ರು. ಈಗ ಫಲಿತಾಂಶಕ್ಕೂ ಭಯಪಡಿಸಬೇಕೆ? ಎಂದು ಸುರೇಶ್​ ಕುಮಾರ್​ ಪ್ರಶ್ನಿಸಿದ್ರು.


ನಾಳೆ ಅಂತೂ ಫಲಿತಾಂಶ ಪ್ರಕಟವಿಲ್ಲ. ವಿದ್ಯಾರ್ಥಿಗಳು ಆರಾಮಾಗಿ ಇರಲಿ. ಸೋಮವಾರ ಅಥವಾ ಮಂಗಳವಾರ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ ಅಂತ ಅವರು ಸ್ಪಷ್ಟಪಡಿಸಿದ್ರು.

No comments:

Post a Comment