ಕರ್ನಾಟಕ ವಿಧಾನಸಭಾ ಚುನಾವಣಾ ನಿಮಿತ್ತ ಕೇಂದ್ರದಿಂದ ಬಂದಿರುವ ಬಿಜೆಪಿ ನಾಯಕರ ಸುಳ್ಳು ಹೇಳಿಕೆಗೆ ರಾಮಲಿಂಗಾರೆಡ್ಡಿ ಗೃಹ ಸಚಿವರಿಂದ ಕಡಕ್ ಉತ್ತರ

ಕರ್ನಾಟಕ ವಿಧಾನಸಭಾ ಚುನಾವಣಾ ನಿಮಿತ್ತ ಕೇಂದ್ರದಿಂದ ಬಂದಿರುವ ಬಿಜೆಪಿ ನಾಯಕರ ಸುಳ್ಳು ಹೇಳಿಕೆಗೆ ರಾಮಲಿಂಗಾರೆಡ್ಡಿ ಗೃಹ ಸಚಿವರಿಂದ ಕಡಕ್ ಉತ್ತರ

1. ನೂರು ಮಂದಿ ಬಿಜೆಪಿ
ನಾಯಕರಿಂದ ಇಂದು ಬಿಜೆಪಿ ಪರ ಪ್ರಚಾರ.

ವಾಸ್ತವ: ನೂರು ಜನರ ಬಿಜೆಪಿ ನಾಯಕರು ಕರ್ನಾಟಕಕ್ಕೆ ಪ್ರಚಾರ ಮಾಡಲುಬರುತ್ತಿರುವುದನ್ನು ನೋಡಿದರೆ, ಪಾಂಡವರ ವಿರುದ್ದ ಕೌರವರು ದಂಡೆತ್ತಿ
ಬಂದಂತೆಕಾಣುತ್ತದೆ.

ಬಿಜೆಪಿ ಯವರು ನೂರಲ್ಲ
ಒಂದು ಸಾವಿರ ಜನಬಂದರು
 ಕರ್ನಾಟಕದಲ್ಲಿ ಕಾಂಗ್ರೆಸ್
ಗೆಲುವನ್ನುತಡೆಯಲು
ಸಾಧ್ಯವಿಲ್ಲ, ಏಕೆಂದರೆ ಪಾಂಡವರಿಗೆ ಶ್ರೀ ಕೃಷ್ಣ ಹೇಗೆ
ರಕ್ಷಣೆ ಮಾಡಿದನೋ ಅದೇ
ರೀತಿಯಲ್ಲಿ ಕರ್ನಾಟಕ ಜನತೆಯು ನಮ್ಮ ಸರ್ಕಾರದ ಸೇವೆ ಮತ್ತುಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಆಡಳಿತ ನಡೆಸಲುಅವಕಾಶ ಮಾಡಿ
ಕೊಡುತ್ತಾರೆ.

ಇಷ್ಟು ಜನ ಬರುವುದರಿಂದಲೆ
ಕರ್ನಾಟಕರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಏನೆಂದುತಿಳಿಯುತ್ತದೆ.
 ಬಿಜೆಪಿಯ ಎಲ್ಲ ನಾಯಕರಿಗೆಈಗ ಕರ್ನಾಟಕ ತವರೂರಾಗಿ ಬಿಟ್ಟಿದೆ.ಈಹಿನ್ನಲೆಯಲ್ಲಿ ನಾ ಮುಂದು ತಾ ಮುಂದು ಎಂದು ಪ್ರಚಾರಕ್ಕೆ ಬರುತ್ತಾ
ಇದ್ದಾರೆ. ಬಂದದಾರಿಗೆ
ಸುಂಕವಿಲ್ಲದೇ ಬಿಜೆಪಿ
ನಾಯಕರಿಗೆ ಕರ್ನಾಟಕ ನಿರಾಶಾದಾಯಕವಾಗಲಿದೆ ಎಂಬುದು ಅಂತು
ಸತ್ಯ.

2. ಮೋದಿ ಎಲ್ಲೆಡೆ ಕಾಂಗ್ರೆಸ್ಸೋಲೊಪ್ಪಿಕೊಂಡಿದೆ ಎಂದು ಆರೋಪಿಸಿದ್ದಾರೆ.

ವಾಸ್ತವ: ಕರ್ನಾಟಕ ರಾಜ್ಯದ  ಬಿಜೆಪಿನಾಯಕರು ಯಾವ  ಪ್ರಚಾರದಲ್ಲಿಯೂಕಾಣಿಸ್ತಾ  ಇಲ್ಲ. ಕರ್ನಾಟಕದಲ್ಲಿ  ಚುನಾವಣೆನಡೆಸ್ತಾ ಇರೋದು ಮೋದಿ ಹಾಗೂ  ಉತ್ತರಭಾರತದ ಬಿಜೆಪಿ  ನಾಯಕರು. ಒಬ್ಬ ಸಿದ್ದರಾಮಯ್ಯನವರನ್ನು  ಎದುರಿಸಲು ದೇಶದ ಬಿಜೆಪಿ ಪಕ್ಷದ ಪ್ರಧಾನಿ, 5 ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಮತ್ತು 20 ಮಂದಿ ಕೇಂದ್ರ ಬಿಜೆಪಿ ಸಚಿವರು ಅಖಾಡಕ್ಕಿಳಿದಿದ್ದಾರೆ ಅಂದ್ರೆಕರ್ನಾಟಕದ ಕಾಂಗ್ರೆಸ್ ಶಕ್ತಿ ಏನುಎಂಬುವುದು ಗೊತ್ತಾಗತ್ತೆ .

ರಾಜ್ಯ ಮಟ್ಟದ ಒಬ್ಬ  ನಾಯಕರು ಬಿಜೆಪಿಪಕ್ಷದಲ್ಲಿ  ಇಲ್ಲವೇ? ಎಂಬುದೇ ಯಕ್ಷ ಪ್ರಶ್ನೆ?



3. ಮೋದಿ 4 ರಾಜ್ಯಗಳ ಸಭೆ  ಕರೆಯುವುದ್ರ ಬಗ್ಗೆ ಚಕಾರ ಎತ್ತಿಲ್ಲ

ವಾಸ್ತವ: ಕರ್ನಾಟಕ ರಾಜ್ಯ  ಕುರಿತು ನಿರಂತರ ಮಲತಾಯಿ ಧೋರಣೆ  ತೋರಿದ ಮೋದಿ ನೀರಾವರಿ ಯೋಜನೆಗಳು  ಹಾಗೂ ಅಂತರಾಜ್ಯ ಜಲವಿವಾದ  ಪರಿಹರಿಸಲು 4 ರಾಜ್ಯಗಳ  ಸಿಎಂ ಸಭೆ ಕರೆದು ವಿವಾದ ಪರಿಹರಿಸುವ ಕುರಿತು  ಮಾತನಾಡುವುದನ್ನು ಬಿಟು ಬೇರೆಲ್ಲ ಕಥೆ, ಪುರಾಣ ಹೇಳ್ತಾರೆ.



4. ಭ್ರಷ್ಟಾಚಾರಕ್ಕೆ ಬಿಜೆಪಿಯಲ್ಲಿ ಆಸ್ಪದವಿಲ್ಲ.

ವಾಸ್ತವ: ಇದೊಂದೇ ಮೋದಿ ಸತ್ಯ ನುಡಿದಿದ್ದು.ಈಗಾಗಲೇ
ಭ್ರಷ್ಟಾಚಾರಿಗಳಿಂದ ಕರ್ನಾಟಕಬಿಜೆಪಿ ತುಂಬಿಹೋಗಿ ಹೌಸ್ ಫುಲ್ ಆಗಿದೆ. ಹಾಗಾಗಿ ಹೊಸ ಭ್ರಷ್ಟಾಚಾರಿಗಳಿಗೆ ಆಸ್ಪದವಿಲ್ಲಎಂದು ಮೋದಿ ಹೇಳಿದ್ದಾರೆ.



5. ಹಿಂದುಗಳನ್ನು ಕೊಲೆ
ಮಾಡಿದವರನ್ನು ಪಾತಾಳದಲ್ಲಿದ್ದವರೂ ಹುಡುಕಿ ತೆಗೆಯುತ್ತೇನೆ: ಅಮಿತ್ ಶಾ

ವಾಸ್ತವ: ಕಾಂಗ್ರೆಸ್ ಬಿಡುಗಡೆ ಮಾಡಿರುವ ಕೊಲೆಗಳ ‘ನಗ್ನ ಸತ್ಯ’ ಪುಸ್ತಕವನ್ನು ಅಮಿತ್ಶಾ ಗೆ ಕಳುಸಿಸುತ್ತೇನೆ ಓದಲಿ. ಕೊಲೆ ರಾಜಕೀಯದಿಂದಲೆ ಮೋದಿ ಮತ್ತು ಅಮಿತ್ಶಾ ದೇಶದಲ್ಲಿ
ಫೇಮಸ್. ಕೊಲೆ ರಾಜಕೀಯಬಿಜೆಪಿಯ ಮೂಲ
ಸಿದ್ದಾಂತವೂ ಹೌದು. ಈಗ ಕರ್ನಾಟಕದಲ್ಲಿ ಕೊಲೆ
ರಾಜಕಾರಣ ಮಾಡಲು ಬಂದಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ಕೊಲೆಮಾಡಿಸಿದ್ದೇ
ಬಿಜೆಪಿಯವರು.  ಹೇಳಿದ
ಮತ್ತು ಹೇಳದೇ ಮರೆಮಾಚಿದ ಸಾವುಗಳ ಹಿಂದಿನ ನಗ್ನ ಸತ್ಯವನ್ನು ಈಗಾಗಲೇ
ಜನತೆಯ ಮುಂದಿಟ್ಟಿದ್ದೇನೆ.

   

ಸಂಘ ಪರಿವಾರದ
ಕಾರ್ಯಕರ್ತರಿಂದ ಹತ್ಯೆಯಾಗಿರುವ ಹಿಂದುಗಳ
ಬಗ್ಗೆ ಅಮಿತ್ ಶಾರವರು ಏಕೆ ಮಾತನಾಡುತ್ತಿಲ್ಲ. ಹಿಂದುಗಳ
ಹತ್ಯೆಯನ್ನು ಮಾಡಿರುವ
ಆರೋಪಿಗಳನ್ನುಈಗಾಗಲೇ ಬಂಧಿಸಿ ಜೈಲಿನಲ್ಲಿ ಊಟ
ಮಾಡಲು ಕಳುಹಿಸಲಾಗಿದೆ,
 ನಿಮಗೆ ಅದರ ಶ್ರಮ ಬೇಡ ಶಾ ರವರೇ.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು,
ಬದುಕಿರುವವರನ್ನು ಸಹ ಕೊಲೆಮಾಡುವ ಹೀನಾಯ ಸಂಸ್ಕøತಿ ಉಳ್ಳವರು.ಇವರಿಗೆ
ಬೇರೆಯವರ ಜೀವದ ಬಗ್ಗೆ
ಬೆಲೆಯೆ ತಿಳಿದಿಲ್ಲ,
ಯಾವುದಾದರೊಂದು
ವಿಚಾರವನ್ನು ಇಟ್ಟಿಕೊಂಡು ಪ್ರತಿನಿತ್ಯ
ರಾಜ್ಯದಲ್ಲಿ
ಕೋಮುಗಲಭೆಗಳಿಗೆ, ಸಂಘರ್ಷಣೆಗಳಿಗೆ ಹಿಂಬಾಗಿಲಿನಿಂದ ಕುಮಕ್ಕು
 ನೀಡಿ ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು
ಕದಡುವುದರಲ್ಲಿಪರಿಣಿತರು,
ಆದರೆ ನಮ್ಮ ರಾಜ್ಯದಲ್ಲಿ ಇವರಬೇಳೆ ಬೇಯಲಿಲ್ಲ.

ನಮ್ಮ ಸರ್ಕಾರ ಅಧಿಕಾರಕ್ಕೆ
ಬಂದ ನಂತರ ಇದೆಲ್ಲದರ ಮೇಲೆ ನಿಗಾವಹಿಸಿ ಸಾಕಷ್ಟು ಮುಂಜಾಗೃತ ಕ್ರಮವನ್ನು ಕೈಗೊಂಡಿರುವುದರಿಂದ ರಾಜ್ಯದಲ್ಲಿ ಶಾಂತಿ ಮತ್ತು ಸೌರ್ಹಾದತೆಯನ್ನು ಕಾಪಾಡಲು ಯಶಸ್ವಿಯಾಗಿದೆ.



6) ಬಹಿರಂಗ ಚರ್ಚೆಗೆ ಬನ್ನಿ
ಎಂದು ಸಿದ್ದರಾಮಯ್ಯ ಹೇಳಿದ್ರೂ ಪ್ರತಿಕ್ರಿಯಿಸದ Bjp.

ವಾಸ್ತವ: ಎಲ್ಲಾ ಪತ್ರಿಕೆಗಳಲ್ಲಿ
 CM  ಜಾಹೀರಾತುನೀಡಿ ವೈಯಕ್ತಿಕ ಟೀಕೆ ಗಿಂತ ಬಹಿರಂಗ ಚರ್ಚೆಗೆ ಬನ್ನಿ ಎಂದು bjpಗೆ  ಆಹ್ವಾಸಿದ್ದಾರೆ.
ನೀವು ಹೇಳುವ , ಸ್ಥಳ,
ಸಮಯಕ್ಕೆ ಹಾಜರಾಗುತ್ತೇನೆ ಎಂದು ಸಹ ಸಿಎಂ ಹೇಳಿದ್ರೂ ಬಿಜೆಪಿ ಏಕೆ ಪ್ರತಿಕ್ರಿಯಿಸಿಲ್ಲ. ಬಹಿರಂಗ ಮುಕ್ತ ಚರ್ಚೆಗೆ ಕಾಂಗ್ರೆಸ್
ಪಕ್ಷವು ಸದಾ ಸಿದ್ದವಿದ್ದು, ಬಿಜೆಪಿ
 ನಾಯಕರು ನಮ್ಮ
ಪಂಥಾಹ್ವಾನವನ್ನು ಸ್ವೀಕರಿಸದೆ, ನೇರ ದಿಟ್ಟಸವಾಲಿನಿಂದ ದೂರ ಉಳಿದು ಕೇವಲ
‘ಮನ್ಕಿ ಬಾತ್’ ಗುಂಗಿನಲ್ಲಿ ಇರುತ್ತಾರೆ.



7 ಮೋದಿಯಿಂದ ಪದೇ ಪದೇ ದಲಿತ ಟ್ರಂಪ್ಕಾರ್ಡ್ ಬಳಕೆ.

ವಾಸ್ತವ: ಮೋದಿಯವರೇ
ದಲಿತರ ಬಗ್ಗೆ ಮೊಸಳೆ ಕಣ್ಣೀರಿನ ಭಾಷಣ
ಬಿಟ್ಟು ಅವರ ಮಾತೃ ಸಂಸ್ಥೆ, ಆರ್.ಎಸ್.ಎಸ್ ನಲ್ಲಿ ಎಷ್ಟು ಮಂದಿ ದಲಿತ ಮುಖಂಡರಿಗೆ ಉನ್ನತ ಹುದ್ದೆ ನೀಡಿದ್ದಾರೆ ಎಂದು
 ದಯಮಾಡಿ ತಿಳಿಸಿ,ಇತಿಹಾಸದಲ್ಲಿ ಒಮ್ಮೆ ಆದರೂ ಆರ್.ಎಸ್.ಎಸ್ ಮುಖ್ಯಸ್ಥ
ಸ್ಥಾನ ನೀಡಿದ್ದೀರಾ ಎಂದು ತಿಳಿಸಲು ಕೋರುತ್ತೇನೆ. ಪ್ರಥಮ ಬಾರಿಗೆ ಒಬ್ಬ ದೇಶದ ಪ್ರಧಾನ ಮಂತ್ರಿ ಘನೆತವೆತ್ತ ರಾಷ್ಟ್ರಪತಿ ಹುದ್ದೆಯನ್ನು ಸಹ ಜಾತಿಗೆ ಸೀಮಿತಗೊಳಿಸಿ
ಸಂಕುಚ ಮನೋಭಾವದ ರಾಜಕೀಯ ಹೇಳಿಕೆಯನ್ನು ನೀಡಿರುವುದು ನಿಜಕ್ಕೂ
 ಬೇಸರದ ಸಂಗತಿ.


8.ಮೋದಿ ಭಾಷಣದಿಂದ
ಹೊಟ್ಟೆ ತುಂಬುವುದೇ..?

ವಾಸ್ತವ: ಮೋದಿ ವಾಸ್ತವ
ಸಮಸ್ಯೆಗಳನ್ನು ಮರೆಮಾಚೋದ್ರಲ್ಲಿ
ನಿಸ್ಸೀಮರು. ಹೀಗಾಗಿ
ಶೂನ್ಯದಲ್ಲೇ ಗಾಳಿ ಗೋಪುರ
 ಕಟ್ಟಿಬಿಡುತ್ತಾರೆ. ಆದರೆ ಈ
ಸುಳ್ಳಿನ ಗಾಳಿ ಗೋಪುರ ಚುನಾವಣೆಯ ಮೊದಲೇ
ಕುಸಿದುಹೋಗಲಿದೆ. ಬಿಜೆಪಿಯ ಅಶ್ವಮೇಧದಕುದುರೆಯನ್ನು ಈಗಾಗಲೇ ಕಟ್ಟಿ ಹಾಕಿದ್ದೇವೆ.
 ಇದನ್ನು ಅರಿತ ಬಿಜೆಪಿ ನಾಯಕರುಗಳು ಹೆದರಿ ರಾಜ್ಯಕ್ಕೆ ದೌಡಾಯಿಸುತ್ತಿರುವುದೆ ಸಾಕ್ಷಿ.

9. ಗೋಹತ್ಯೆಗೆ ಕಾಂಗ್ರೆಸ್
ಕುಮ್ಮಕ್ಕು, ಯೋಗಿ ಆದಿತ್ಯನಾಥ್ ಹೇಳಿಕೆ

ವಾಸ್ತವ: ಮೋದಿ ಬಂದ ಮೇಲೆ ಭಾರತ ಗೋಮಾಂಸ ರಫ್ತಿನಲ್ಲಿ ನಂಬರ್ 1 ಆಗಿದೆ. ಭಾರತದ ಒಳಗೆ ಗೋ ಭಕ್ತಿ , ವಿದೇಶದಲ್ಲಿಗೋಮಾಂಸದಲ್ಲಿ ಬ್ಯುಸಿನೆಸ್. ದೇಶದಜನತೆಯೂ ಬಿಜೆಪಿ ನಾಯಕರ ನಕಲಿಗೋಭಕ್ತಿಯನ್ನು ಅರ್ಥ ಮಾಡಿಕೊಳ್ಳಲಿ. CMIE - Centre For Minoriting Indian Economy Data ಪ್ರಕಾರ ಮೋದಿ ಆಡಳಿತದಲ್ಲಿ ಗೋ ಮಾಂಸ ರಫ್ತು ಪ್ರತಿ ವರ್ಷ14% ಹೆಚ್ಚಳ ಕಂಡಿದೆ.



10. ಕಾಂಗ್ರೆಸ್ ಗೂಂಡಾ,
ಮಾಫಿಯಾ ಸರ್ಕಾರಯೋಗಿ
ಆರೋಪ

ವಾಸ್ತವ: ಯೋಗಿ ಆದಿತ್ಯನಾಥ್ ತಮ್ಮರಾಜ್ಯವಾದ ಉತ್ತರಪ್ರದೇಶದಲ್ಲಿ ತಮ್ಮ bjp ಶಾಸಕರಿಂದಲೇ
ನಡೆಯುತ್ತಿರುವ ಅತ್ಯಾಚಾರವನ್ನು ತಡೆಯಲಿ
. ಆಮೇಲೆ ಕರ್ನಾಟಕದದ ಬಗ್ಗೆ
ಮಾತನಾಡಲಿ. ದೇಶದಕ್ರೈಂ ರೇಟ್ ನಲ್ಲಿ UP ನೇ ನಂಬರ್ 1.

ಈಗಾಗಲೇ ಕೇಂದ್ರ ಸರ್ಕಾರದ NCRB ಪ್ರಕಟಿಸಿರುವ ಅಂಕಿಅಂಶಗಳ ಆಧಾರದಮೇಲೆ ಸಾಕಷ್ಟು ಬಾರಿ ನಾನು ಮಾಹಿತಿಯನ್ನು ನೀಡಿದ್ದೇನೆ.

      ತಮ್ಮ ಆಡಳಿತವಿರುವ
ಉತ್ತರಪ್ರದೇಶದ ರಾಜ್ಯದ ಶಾಸಕರು ಅಮಾಯಕ ಹೆಣ್ಣುಮಗಳಮೇಲೆ
ಅತ್ಯಾಚಾರ ಮಾಡಿ, ಈ ಬಗ್ಗೆ ನ್ಯಾಯಕೇಳಲು ಬಂದ ಅವರ ತಂದೆಯನ್ನು ಅಮಾನವೀಯವಾಗಿ ನಡೆಸಿಕೊಂಡಿರುತ್ತಾರೆ. ಮೊದಲು ಇಂತಹ ನೀಚ
ಸಂಸ್ಕೃತಿ
ಇರುವ ಶಾಸಕರನ್ನು ಮತ್ತು ನಿಮ್ಮ ಹಿಂಬಾಲಕರನ್ನು ಹತ್ತಿಕ್ಕಲ್ಲು ಪ್ರಯತ್ನಿಸಿ, ನಿಮ್ಮ
 ತಟ್ಟೆಯಲ್ಲಿಬಿದ್ದಿರುವ
ಹೆಗ್ಗಣವನ್ನು ತೆಗೆಯಿರಿ
ತದನಂತರಇನ್ನಿತರರ
ಬಗ್ಗೆ ಮಾತನಾಡಿ.

No comments:

Post a Comment