*ರಾಜ್ಯಕ್ಕೆ ಬಿಜೆಪಿ ಯಾಕೆ ಬೇಡ-*
ಅಧಿಕಾರದ ಅಮಲು ಏರಿಸಿ ಕೊಂಡಿರುವ ಬಿಜೆಪಿಗೆ ಯಾವುದೇ ಸಿದ್ಧಾಂತಗಳಿಲ್ಲ. ಸಣ್ಣಅಧಿಕಾರಕ್ಕಾಗಿ ಎಲ್ಲವನ್ನು ದುರ್ಬಳಕೆ ಮಾಡುತ್ತಿದೆ. ಧರ್ಮಗಳ ಮಧ್ಯೆ ವೈಷಮ್ಯ ಹರಡುವ ಪರಿವಾರ ಸಂಘಟನೆಗಳ ಮೂಲಕ ಚುನಾವಣೆ ಗೆಲ್ಲಲು ಯತ್ನಿಸುತ್ತಿದೆ.
ಸರ್ಕಾರಿ ಸಂಸ್ಥೆಗಳಾದ ಐ.ಟಿ., ಇ.ಡಿ.ಗಳ ಮೂಲಕ ಸುಳ್ಳು ಕೇಸ್‍ಗಳನ್ನು ದಾಖಲಿಸುತ್ತಿದೆ. ಸುಳ್ಳು ಸುದ್ಧಿಗಳನ್ನು ಹರಡಿ ದ್ವೇಷ, ಸಂಶಯ, ಭಯಗಳ ಮೂಲಕ ಚುನಾವಣೆ ಗೆಲ್ಲಲು ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತಿದೆ
. ಪ್ರಜಾತಂತ್ರದ ಹಬ್ಬವಾಗಬೇಕಿದ್ದ ಚುನಾವಣೆಯನ್ನು ದ್ವೇಷ ರಾಜಕಾರಣದ ಸಂಘರ್ಷದ ಮಟ್ಟಕ್ಕೆ ಇಳಿಸಿ ಇಡೀ ವಿಶ್ವವೇ ಭಾರತದಲ್ಲಿ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ಕುತೂಹಲದಿಂದ ನೋಡುವಂತಾಗಿದೆ..
ಇದು ಬಿಜೆಪಿ ರಾಜಕಾರಣದ ಕೊಡುಗೆ.
ಪ್ರಧಾನ ಸೇವಕನೆಂದು ಕರೆಸಿಕೊಳ್ಳುವ ಪ್ರಧಾನಿ, ಪಾರ್ಲಿಮೆಂಟ್‍ನಲ್ಲಿ ಉತ್ತರ ನೀಡದೇ ಚುನಾವಣಾ ಸಭೆಯಲ್ಲಿ ಮಾತ್ರ ಮಾತನಾಡುವುದನ್ನು ಎಲ್ಲರೂ ನೋಡುತ್ತಿದ್ದಾರೆ. ದೇಶದೊಳಗೆ ಪ್ರಬಲ ಹಿಂದುತ್ವವನ್ನು ಪ್ರತಿಪಾದಿಸುವ ಬಿಜೆಪಿ ಹಾಗೂ ಅದರ ಸಹ ಸಂಸ್ಥೆಗಳು ತಮ್ಮನ್ನು ವಿರೊಧಿಸುವ ಎಲ್ಲರನ್ನು ದೇಶದ್ರೋಹಿಗಳೆಂದು ಧರ್ಮದ್ರೋಹಿಗಳೆಂದು ಕರೆಯುತ್ತಿದೆ.
ವಿರೋಧವಿಲ್ಲದ ರಾಜಕಾರಣ ಮಾಡ ಬಯಸುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಭಯವಿದೆ. ಪ್ರಜಾಪ್ರಭುತ್ವದ ಸಿದ್ಧಾಂತಗಳಾದ ಸಮಾನತೆ, ಎಲ್ಲರ ಏಳಿಗೆ ಹಾಗೂ ಸಹಿಷ್ಣುತೆ 130 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಡಿ.ಎನ್.ಎ.ಯಲ್ಲೇ ಇದೆ. ಅದು ಬಿಜೆಪಿಗೆ ಸಹಿಸಲಾಗುತ್ತಿಲ್ಲ.
ಜನಸಂಘದ ವಿಭಜನೆ ಹಾಗು ಹಿಂಸೆಯ ಡಿ.ಎನ್.ಎ. ಉಳ್ಳ ಈ ಪಕ್ಷವು ದೇಶದ ಚರಿತ್ರೆಯನ್ನು ಸುಳ್ಳುಗಳ ಮೂಲಕ ಬದಲಾಯಿಸಲು ಹೊರಟಿದೆ. ಆದರೆ ಭಾರತೀಯರ ಡಿ.ಎನ್.ಎ. ಉಳ್ಳ ಕಾಂಗ್ರೆಸ್ ಪಕ್ಷ ಎಲ್ಲರನ್ನು ಗೌರವಿಸಿ ಸಹಬಾಳ್ವೆಗೆ ಒತ್ತು ನೀಡಿದೆ.
ತನ್ನ ಹಿಂದೂ ಓಟ್ ಬ್ಯಾಂಕ್ ರಾಜಕಾರನವನ್ನು ಮರೆಮಾಚಲು ಬಿಜೆಪಿ ಎಲ್ಲಾ ವಿರೋಧ ಪಕ್ಷಗಳನ್ನು “ಮುಸ್ಲಿಂ ವೋಟ್ ಬ್ಯಾಂಕ್”ಗಾಗಿ ಇರುವವರು ಎಂದು ಸುಳ್ಳು ಹೇಳುತ್ತಿದೆ. ಕರ್ನಾಟಕದಲ್ಲಿ ಹಿಂದೂ ಓಟ್ ಬ್ಯಾಂಕ್ ರಾಜಕಾರಣ ಖಂಡಿತಾ ನಡೆಯುದಿಲ್ಲ ಇಲ್ಲಿಯ ಜನರಿಗೆ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯಿದೆ. ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವ ಶಕ್ತಿಯಿದೆ.
ಹಿಂದುಳಿದ ವರ್ಗಗಳ ಯುವಕರನ್ನು ಬಳಸಿಕೊಂಡು ಗೋರಕ್ಷಣೆ, ಧರ್ಮ ರಕ್ಷಣೆ, ಮುಂತಾದ ಹೆಸರಿನಲ್ಲಿ ಅವರನ್ನು ದಾರಿ ತಪ್ಪಿಸಿದ ಬಿಜೆಪಿಯ ಕುತಂತ್ರ ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸ್ ಆಳ್ವಿಕೆಯ ಕಾಲದ ಎಲ್ಲಾ ಅಸಹಜ ಸಾವುಗಳನ್ನು “ಕೋಮು ದ್ವೇಷಕ್ಕೆ ಬಲಿ” ಎಂದು ಚೀರಾಡುವ ಬಿಜೆಪಿ ನಾಯಕರು ತಮ್ಮ ಆಡಳಿತ ಕಾಲದಲ್ಲಿ ನಡೆದ ಗೊಲಿಬಾರ್‍ಗೆ ಯುವಕರ ಕೊಲೆಗಳಿಗೆ ಜವಾಬ್ದಾರಿ ಒಪ್ಪಿಕೊಂಡಿದ್ದಾರೆಯೇ ?
ಸುಳ್ಳು ವರದಿಗಳನ್ನು ಹುಟ್ಟಿಸಿ ಅಮಾಯಕರನ್ನು ದಾರಿ ತಪ್ಪಿಸುವ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳು
-ಉದ್ಯಾವರ ನಾಗೇಶ್ ಕುಮಾರ್

No comments:
Post a Comment